ಸಂಕೋಲೆ



 ಅಂದು ಮಾನವ ನಿರ್ಮಿತ ಕಬ್ಬಿಣದ ಸಂಕೋಲೆ ➡️ ಇಂದು ಕಾಣದ ಕೈಗಳ ನಿರ್ಮಿತ ಮಾನಸಿಕ ಸಂಕೋಲೆ.


ನಾವು ಗುಲಾಮರಾಗುವುದು ನಮ್ಮಿಂದಲೇ – ಸಂಸ್ಕೃತಿ, ಆಸೆ ಮತ್ತು ಆಳ್ವಿಕೆಯ ಕಥೆ.


(ಇದರಲ್ಲಿ ಯಾವುದೇ ಟೀಕಾಸ್ಪದ ಉದ್ದೇಶವಿಲ್ಲ; ದಯವಿಟ್ಟು ಆರೋಗ್ಯವಂತ ಚಿಂತನೆಯಾಗಿ ಸ್ವೀಕರಿಸಿ.)


ಹಿಂದಿನ ಕಾಲದಲ್ಲಿ ಅನೇಕ ಪ್ರಾಂತ್ಯಗಳನ್ನು ಆಳುವ ರಾಜರಿದ್ದರು 👑. ಇಂದು ರಾಜನ ಸ್ಥಾನದಲ್ಲಿ ಒಬ್ಬ ರಾಜಕಾರಣಿ ಇದ್ದಾನೆ. ಅಂದು ಜನರ ಜೀವನ ಇಂದಿನಂತೆಯೇ ಇತ್ತು. ಆದರೆ ಅಂದು ಕೇವಲ ಒಂದು ಸಂಸ್ಕೃತಿಯ ಜಾಡು ಹಿಡಿದು ಬಂದ ನಮ್ಮ ದೇಶ ಸ್ವಾತಂತ್ರ್ಯದ ನಂತರ ಮೂಲ ಸಂಸ್ಕೃತಿಯ ಜೊತೆಗೆ ಹೊರಗಿನ ಸಂಸ್ಕೃತಿಗಳು, ಹರಿಯುವ ನದಿಗೆ ಮತ್ತೊಂದು ನದಿ ಸೇರಿ, ಆ ಮೂಲ ನದಿಯನ್ನು (ಸಂಸ್ಕೃತಿ) ಹುಡುಕಲು ಆಗದೆ ಎಲ್ಲ ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದೇವೆ 🌊.


ರಾಜನ ಮಾನಸಿಕತೆ ಏನೆಂದು ಯಾವುದೇ ಕಾರಣಗಳಿಂದ ಅರಿಯಲಾಗುವುದಿಲ್ಲ 🤔. ಅನ್ಯಾಯ ಕಣ್ಣಿಗೆ ಕಾಣುವುದಿಲ್ಲ, ಭಾಸವಾಗುತ್ತದೆ. ಹಾಗೆಯೇ ಇಂದಿನ ದಿನಗಳಲ್ಲಿ ಕೂಡ ಹಿಂದೆ ಮನುಷ್ಯನನ್ನು ಬಂಧಿಸಲು ಕಬ್ಬಿಣದ ಸಂಕೋಲೆಗಳಿದ್ದವು ⛓️. ಇಂದು ಬಳಸುತ್ತಿರುವ ಸಂಕೋಲೆಗಳು ಕಣ್ಣಿಗೆ ಕಾಣುವುದಿಲ್ಲ, ಆದರೆ ಮಾನಸಿಕ ಸಂಕೋಲೆಗಳ ಬಂಧನ ಎಲ್ಲರನ್ನೂ ಬಂಧಿಸುತ್ತಿದೆ 🧠.


ಅಂದು ಕೂಡ ನಾವು ಗುಲಾಮರೇ. ಇಂದು ಕೂಡ ಗುಲಾಮರೇ. ನಾವು ಗುಲಾಮರಾಗುವುದು ಬೇರೆಯವರಿಂದಲ್ಲ, ನಮ್ಮ ಮಾನಸಿಕತೆಯಿಂದಲೇ ನಾವು ಗುಲಾಮರಾಗುತ್ತೇವೆ 😔. ಯಾರೂ ನಮ್ಮನ್ನು ಗುಲಾಮರಾಗಿಸುವುದಿಲ್ಲ. ನಾವು ನಮ್ಮ ಆಸೆ, ಆಕಾಂಕ್ಷೆಗಳು, ದುರಾಸೆಗಳ ಗುಲಾಮರಾಗುತ್ತೇವೆ.


ಉದಾಹರಣೆಗೆ:

ತಿಂಗಳಿಗೆ ಒಂದು ಲಕ್ಷ ದುಡಿಯುವ ಮನುಷ್ಯ ತನ್ನ ಜೀವನದ ಖರ್ಚುಗಳನ್ನು ನಿಭಾಯಿಸಿ ಸ್ವಲ್ಪ ಉಳಿತಾಯ ಮಾಡುತ್ತಾನೆ 💰. ಅದರಲ್ಲಿ ಅವನು ಮಕ್ಕಳ ವಿದ್ಯೆಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಮಾಡಿಸುತ್ತಾನೆ 📚. ಖರ್ಚು ವರ್ಷಕ್ಕೆ ಒಂದು ಲಕ್ಷವಾದರೂ ಮಾಡಲು ಶಕ್ತನಾಗಿದ್ದಾನೆ.


ಇನ್ನೊಬ್ಬನು ತಿಂಗಳಿಗೆ ಇಪ್ಪತ್ತು ಸಾವಿರ ದುಡಿಯುತ್ತಾನೆ 💸. ಆದರೆ ಅವನು ಕೂಡ ಇತರರ ಜೀವನ ನೋಡಿ ತನ್ನ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಸೇರಿಸುವ ಸಾಹಸಕ್ಕೆ ಇಳಿಯುತ್ತಾನೆ. ಅವನ ಆದಾಯ ಅದಕ್ಕೆ ಪೂರಕವಾಗಿಲ್ಲವಾದರೂ ಅದನ್ನು ಸರಿದೂಗಿಸಲು ಸಾಲಕ್ಕೆ ಮೊರೆ ಹೋಗುತ್ತಾನೆ 💳.


ಇಲ್ಲಿ ಎರಡನೆಯವನು ಎರಡು ಕಡೆಯಿಂದ ಗುಲಾಮನಾಗುತ್ತಾನೆ. ಮೊದಲನೆಯದು – ಆ ಮೊದಲನೇ ವ್ಯಕ್ತಿಯ ಹಾಗೆ ಅವನ ದಾರಿಯಲ್ಲಿ ಅವನ ಹೆಜ್ಜೆಗಳನ್ನು ತುಳಿದು ನಡೆಯಲು ಹೋಗಿ 👣. ಮತ್ತೊಂದು – ಸಾಲದ ಗುಲಾಮನಾಗುತ್ತಾನೆ. ಆಮೇಲೆ ತನ್ನ ದಾರಿಯನ್ನು (ಯೋಗ್ಯತೆ) ತಪ್ಪಿ ಸಾಲದ ಹೊರೆಯಲ್ಲಿ ತನ್ನೊಳಗೆ ತಾನು ಗುಲಾಮನಾಗುತ್ತಾನೆ 🏦.


ಆದರೆ ಅವನು ಇದನ್ನು ಮಾಡಿದ್ದು ತನ್ನ ಭವಿಷ್ಯ ಅಂದರೆ ಕಲಿತ ಮಕ್ಕಳು ಅವನ ಕೊನೆಗಾಲದಲ್ಲಿ ಅವನ ಆಸರೆ ಆಗುತ್ತಾರೆ ಅನ್ನುವ ಭರವಸೆಯಿಂದ ಈ ಸಾಹಸಕ್ಕೆ ಕೈ ಹಾಕಿರುತ್ತಾನೆ 🎓. ಆದರೆ ತಾನು ತಮಗರಿವಿಲ್ಲದೆ ತನ್ನ ಬೇರನ್ನು ಬಿಟ್ಟಿರುತ್ತಾನೆ – ಅಂದರೆ ತನ್ನ ಮಾತೃಭಾಷೆ, ಸಂಸ್ಕೃತಿ 🏡. ಯಾಕೆಂದರೆ ಭಾಷೆ ಅನ್ನುವುದು ಒಂದು ಮಾಧ್ಯಮ. ಅದರಿಂದಲೇ ನಾವು ನಮ್ಮ ಬೇರುಗಳಿಗೆ ಅಂಟಿಕೊಂಡಿರುತ್ತೇವೆ 🌱.


ಇಬ್ಬರೂ ಗುಲಾಮರಾದರು – ಲಕ್ಷ ದುಡಿಯುವವನೂ, ಇಪ್ಪತ್ತು ಸಾವಿರ ದುಡಿಯುವವನೂ 👥. ಇದು ಕೇವಲ ಇಬ್ಬರ ಜೀವನವಲ್ಲ. ಸಮಾಜದ ಮತ್ತು ದೇಶದ ಜನರ ಜೀವನದ ಕಥೆ 📖.


ಹಾಗಾದರೆ ಹಿಂದಿನ ಜನರ ಜೀವನಕ್ಕೆ ಇಂದಿನ ಜನರ ಜೀವನಕ್ಕೆ ಏನು ವ್ಯತ್ಯಾಸ? ಅಂದಿನ ಜನರ ಜೀವನದಲ್ಲಿ ಸೌಕರ್ಯಗಳು, ಅವಕಾಶಗಳು ಇಲ್ಲದಿದ್ದರೂ ಮಾನಸಿಕವಾಗಿ ಸದೃಢವಾಗಿದ್ದರು 💪 ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಬಿಟ್ಟುಕೊಡಲಿಲ್ಲ; ಅದಕ್ಕಾಗಿ ಹೋರಾಡಿದರು. ಕಡಿಮೆ ಆದಾಯದಲ್ಲೂ ತಮ್ಮ ಜೀವನವನ್ನು ಕಟ್ಟಿಕೊಂಡು ನಮ್ಮ ಇಂದಿನ ಭವಿಷ್ಯಕ್ಕೆ ಅಡಿಪಾಯವನ್ನು ಗಟ್ಟಿಗೊಳಿಸಿ ಕೊಟ್ಟು ಹೋದರು 🌾. ಅವರು ಮೂಲ ನದಿಯ ಹರಿವುಗಳಾಗಿದ್ದರು 🌊. ಅಂದು ಭಾರತ ಭೌತಿಕತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ.


ಆದರೆ ಇಂದು ಸರ್ಕಾರದಲ್ಲಿರುವವರು ಸಾವಿರ ಸಾವಿರ ಯೋಜನೆಗಳನ್ನು ನಮ್ಮ ಮನೆ ಬಾಗಿಲಿಗೆ ತಂದು ಒಪ್ಪಿಸಿದರೂ ನಮ್ಮ ಜೀವನದಲ್ಲಿ ಆ ನೆಮ್ಮದಿ ಕಾಣುತ್ತಿಲ್ಲ 🏠. ಯಾಕೆಂದರೆ ನಾವು ನಮ್ಮ ಮೂಲ ನದಿಯ (ಸಂಸ್ಕೃತಿ, ಸಂಸ್ಕಾರ, ಭಾಷೆ) ಹರಿವನ್ನು ಬಿಟ್ಟು ಹೊಸ ನದಿಯ ಜೊತೆ ಹರಿಯುತ್ತಿದ್ದೇವೆ 🌊➡️🌊. ಎರಡು ನದಿಗಳ ನೀರನ್ನು ಬೇರೆ ಮಾಡಲು ಆಗುವುದಿಲ್ಲ. ಅದರಲ್ಲಿದೆ ಮೂಲ ನದಿಯ ನೀರನ್ನು ಹುಡುಕಲು ಸಾಧ್ಯವಿಲ್ಲ. ಆದರೆ ಸಂಸ್ಕಾರ, ಸಂಸ್ಕೃತಿ, ಭಾಷೆಗಳು? ಅವುಗಳನ್ನಾದರೂ ಗುರುತಿಸಬಹುದಲ್ಲವೇ? ಅವುಗಳ ಜೊತೆಗೆ ಹರಿಯಬಹುದಲ್ಲವೇ?


ಇದು ಕೇವಲ ವಿದ್ಯೆಯನ್ನು ಪಡೆಯುವ ವಿಷಯದಲ್ಲಿ ಮಾತ್ರವಲ್ಲ. ಇನ್ನೂ ಅನೇಕ ವಿಷಯಗಳಲ್ಲಿ ನಾವು ಇತರರನ್ನು ಹಿಂಬಾಲಿಸುತ್ತಿದ್ದೇವೆ, ಅವರ ಹೆಜ್ಜೆಗಳ ಮೇಲೆ ಹೆಜ್ಜೆ ಹಾಕುತ್ತಿದ್ದೇವೆ 👣. ನಾವು ನಮ್ಮ ಮೇಲೆ ನಮಗೆ ನಂಬಿಕೆ ಇಡದೆ, ಅವರ ಮಕ್ಕಳು ಮುಂದೆ ದೊಡ್ಡ ಮನುಷ್ಯರಾಗುತ್ತಾರೆ, ನಮ್ಮ ಮಕ್ಕಳು ಅಲ್ಲಿಯೇ ಉಳಿಯುತ್ತಾರೆ ಅನ್ನುವ ಮಾನಸಿಕತೆಯನ್ನು ಬೆಳೆಸಿಕೊಳ್ಳುತ್ತಾ ಭಯ 😨, ಆಸೆ 😍, ದುರಾಸೆಗಳ 😤 ಮಾನಸಿಕ ಸಂಕೋಲೆಯನ್ನು ಕಟ್ಟಿಕೊಂಡು ಬದುಕುತ್ತಿದ್ದೇವೆ.


ಇದಕ್ಕೆ ಉದಾಹರಣೆಯಾಗಿ ಮಾಧ್ಯಮ ಪ್ರಭಾವಗಳು – ಕ್ರಿಕೆಟ್ 🏏, ಫಿಲ್ಮ್ 🎬, ರಿಯಾಲಿಟಿ ಶೋಗಳಂತಹ ಬಿಗ್ ಬಾಸ್, ಕರೋಡಪತಿ, ಕೌಟುಂಬಿಕ ರಿಯಾಲಿಟಿ ಶೋಗಳು, ಪಾಶ್ಚಿಮಾತ್ಯ ಶೈಲಿಯ ಗೇಮ್ ಶೋಗಳು 🎲 – ಯೌವನವನ್ನು, ಆಸೆಗಳನ್ನು, ಆಯ್ಕೆಗಳನ್ನು, ಜೀವನ ಶೈಲಿಯನ್ನು ಬೇರೆಯ ದೇಶದ ದೃಷ್ಟಿಕೋಣಕ್ಕೆ ಹೇರಿಸುತ್ತಿವೆ. ಈ ಶೋಗಳು ಭಾರತೀಯ ಮೂಲ ಸಂಸ್ಕೃತಿಯ ಹರಿವನ್ನು ತಡೆಗಟ್ಟುತ್ತವೆ ಮತ್ತು ಪಾಶ್ಚಿಮಾತ್ಯ ಮಾನಸಿಕತೆ ಹರಡುವಂತೆ ಮಾಡುತ್ತವೆ 🌀.


ಆದರೆ ಇದರ ಲಾಭ ಯಾವಾಗಲೂ ನಮಗೆ ನಷ್ಟವನ್ನು ಎರಡು ರೀತಿಯಲ್ಲಿ ತರುತ್ತದೆ. ಒಂದು – ನಮ್ಮನ್ನೇ ನಮ್ಮೊಳಗೆ ನಾವು ಗುಲಾಮರಾಗಿಸುವುದರಲ್ಲಿ 😔. ಮತ್ತೊಂದು – ಹೊರಗಿನ ಅಂದರೆ ನಮ್ಮನ್ನು ಆಳುವ ವರ್ಗದವರಿಂದ. ಅವರು ಮೇಲೆ ಕುಳಿತು ಒಂದು ಸಾಮೂಹಿಕ ದೃಷ್ಟಿಕೋನವನ್ನು ಅಳೆಯುವ ಮಾಪನವನ್ನು ಬಳಸುತ್ತಾರೆ (TRP)📊 (ಸಾಮಾಜಿಕ ಜಾಲತಾಣಗಳ ಮೂಲಕ, ಅಭಿಪ್ರಾಯಗಳ ಮೂಲಕ, ನಮ್ಮ ಆಚರಣೆಗಳ ಮೂಲಕ, ನಮ್ಮ ವಿರೋಧ ಪ್ರತಿರೋಧಗಳ ಆಧಾರದ ಮೇಲೆ). ಜೊತೆಗೆ ಅವರು ತರುವ ಯೋಜನೆಗಳ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ ಜನರ ಮನಸಿನ ತರಂಗಗಳನ್ನು ಹಿಡಿಯುತ್ತಾರೆ 🗳️ (ಉಚಿತ ಯೋಜನೆಗಳು, BPL ಕಾರ್ಡ್). ಯೋಜನೆಗಳನ್ನು(ಅವುಗಳಲ್ಲಿ ನಾವು ಯಾವುದನ್ನು ಸ್ವೀಕರಿಸುತ್ತೇವೆ ಮತ್ತು ಯಾವುದನ್ನು ತಿರಸ್ಕರಿಸುತ್ತೇವೆ) ಜನರ ಭಯ, ಆಸೆ, ದುರಾಸೆ, ಲಾಲಸೆಗಳ ಆಧಾರದ ಮೇಲೆ ಮತ್ತು ಮುಖ್ಯವಾಗಿ ನಮ್ಮ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಎಲ್ಲವನ್ನೂ ನಮ್ಮ ಜೀವನದ ಎಲ್ಲ ಭಾಗಗಳನ್ನು ಅಳೆದು ನಮ್ಮನ್ನು ಎರಡನೆಯ ರೀತಿಯಲ್ಲಿ ಗುಲಾಮರಾಗಿಸಿಕೊಂಡು ಆಳುತ್ತಾರೆ.


ಆದರೆ ಇದು ಕೇವಲ ಒಬ್ಬ ಅಳುವವನ ಮಟ್ಟಿಗೆ ಸೀಮಿತರಾಗಿರುವುದಿಲ್ಲ. ಅದು ಕೂಡ ಹಿಂದಿನಿಂದಲೂ ಹರಿಯುತ್ತಿರುವ ನದಿಯಂತೆ ಹರಿದು ಬರುತ್ತಿದೆ 🌊. ಮುಂದೆ ಇದರ ಹರಿವು ದೊಡ್ಡ ಪ್ರವಾಹವಾಗಿ (ಯುದ್ಧ ⚔️) ನಮ್ಮ ಇಷ್ಟು ದಿನಗಳ ಜೀವನ ಕನಸುಗಳನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ.


ಆದರೆ ಈ ಪ್ರವಾಹದಲ್ಲಿ ನಾವು ಕೊಚ್ಚಿ ಹೋಗುವ ಮೊದಲು ನಮ್ಮನ್ನು ನಾವು ಎಬ್ಬಿಸಬೇಕು 🦅. ಒಂದು ಪ್ರಾಣಿಯನ್ನು ಬೇಕಾದಾಗ ಸಾಕಿ ಬೇಡವಾದಾಗ ಹೊರಗಟ್ಟಿ ಅದರ ಮೂಲ ಬೇಟೆಯಾಡಿ ಸ್ವಾಭಿಮಾನದಿಂದ ಬದುಕುವ ಗುಣವನ್ನು ಕಸಿದು ಬಾಲ ಅಲ್ಲಾಡಿಸಿ ತನ್ನ ಆಹಾರವನ್ನು ಗಿಟ್ಟಿಸಿಕೊಂಡು ತಿನ್ನುವ ಹಾಗೆ ಮಾಡಿ ತನ್ನ ಗುಲಾಮನಾಗಿಸಿಕೊಳ್ಳುವ ಜನರ ನಡುವೆ ನಾವು ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು 🐾.


ನಾವು ಒಂದು ನಮ್ಮ ಜೀವನದ ಬೇರನ್ನು ಅಂದರೆ ನಮ್ಮ ಹಿರಿಯರ ಮಾತುಗಳ ದಾರಿಯನ್ನು ಹಿಡಿದು ಹೋಗಬೇಕು 👴👵. ಇಲ್ಲವಾದರೆ ನಮ್ಮನ್ನು ಆಳುವ ವರ್ಗದಲ್ಲಿ ನೈತಿಕತೆಯನ್ನು ಪಾಲಿಸುತ್ತಿರುವವರನ್ನು ಆರಿಸಿ ಮುಂದೆ ಹೋಗಬೇಕು ✅.

ಇದು ನಮ್ಮ ಕಥೆ. ನಮ್ಮ ಗುಲಾಮಗಿರಿಯ ಕಥೆ. ನಾವೇ ನಮ್ಮನ್ನು ಬಂಧಿಸುತ್ತಿದ್ದೇವೆ. ನಾವೇ ನಮ್ಮನ್ನು ಬಿಡಿಸಿಕೊಳ್ಳಬೇಕು ✊. ಮೂಲ ನದಿಯನ್ನು ಹುಡುಕಿ, ಅದರ ಜೊತೆಗೆ ಹರಿಯುವುದು ನಮ್ಮ ಕೈಯಲ್ಲಿದೆ 🌊.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾಪಿ ಕ್ಯಾಟ್.

ಸಮಾಜ ಮನುಷ್ಯ ದೇಹದ ಪರಿಕಲ್ಪನೆ

ಡಿಜಿಟಲ್ ವಿರಾಮ